Ayush manemaddu & stanya pana saptaha Program @ Mangalore

“ಅಯುಷ್ ಮನೆ ಮದ್ದು ಕಾರ್ಯಕ್ರಮ ಮತ್ತು ಸ್ತನ್ಯಪಾನ ಸಪ್ತಾಹ ದಿನಾಚರಣೆ”

ಮಂಗಳೂರು : ಮಹಿಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ( ನಗರ) ಅಂಗನವಾಡಿ ಕೇಂದ್ರ ಬೋಳೂರು ಮತ್ತು ಅಯುಷ್ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ ಇವರ ಸಯಯೋಗದಲ್ಲಿ ” ಅಯುಷ್ ಮನೆ ಮದ್ದು ಕಾರ್ಯಕ್ರಮ ಮತ್ತು ಸ್ತನ್ಯಪಾನ ಸಪ್ತಾಹ ದಿನಾಚರಣೆ” ಕಾರ್ಯಕ್ರಮ ಸೋಮವಾರ ಬೋಳೂರು – ಸುಲ್ತಾನ್ ಬತ್ತೇರಿ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಬೋಳೂರು ಯುನೈಟೆಡ್ ಸ್ಫೋರ್ಟ್ಸ್‌ನ ಅಧ್ಯಕ್ಷರಾದ ವಾಸುದೇವ್ ಬೋಳೂರು, ಮಾಜಿ ಕಾರ್ಪೊರೇಟರ್ ಕಮಲಾಕ್ಷ ಹಾಗೂ ಅಯುಷ್‌ನ ವೈದ್ಯಾಧಿಕಾರಿಗಳಾದ ಡಾ| ದೇವದಾಸ್ ಮುಖ್ಯ ಅತಿಥಿಗಳಾಗಿದ್ದರು. ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ಲತಾ.ಕೆ ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಡಾ| ಜ್ಯೋತಿ ಹಾಗೂ ಶ್ರೀಮತಿ ಸುಧಾ.ಕೆ ಇವರು ಭಾಗವಹಿಸಿದ್ದರು. ಹುಟ್ಟುವ ಪ್ರತೀ ಮಗುವಿಗೆ ಹುಟ್ಟಿದ ಆರು ತಿಂಗಳವರೆಗಿನ ಬೆಳವಣಿಗೆಯ ಸಂದರ್ಭದಲ್ಲಿ ಸ್ತನ್ಯಪಾನ ಅತೀ ಪ್ರಾಮುಖ್ಯತೆಯನ್ನು ಪಡೆದಿದ್ದು, ಈ ಸಂದರ್ಭದಲ್ಲಿ ಇತರ ಯಾವೂದೇ ಆಹಾರವನ್ನು ನೀಡ ಬಾರದು ಎಂದು ಅವರು ಈ ಸಂದರ್ಭದಲ್ಲಿ ಮಕ್ಕಳ ಫೋಷಕರಿಗೆ ಸಲಹೆ ನೀಡಿದರು. ಸ್ತನ್ಯಪಾನ ಮಗುವಿನೊಂದಿಗೆ ತಾಯಿಯ ಆರೋಗ್ಯಕ್ಕೂ ಪೂರಕವಾಗಿದ್ದು, ಈ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡುವ ಕಾರ್ಯ ಆಗಬೇಕು ಎಂದು ಅವರು ತಿಳಿಸಿದರು.

ಡಾ| ದೇವದಾಸ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಬೊಕ್ಕಪಟ್ನ ಅಂಗನವಾಡಿ ಕೆಂದ್ರದ ಅಂ.ಕಾರ್ಯಕರ್ತೆ ಶ್ರೀಮತಿ ಶಾರದಾ ಅವರು ಕಾರ್ಯಕ್ರಮ ನಿರೂಪಿಸಿದರು. ಬೋಳೂರು ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕುಮುದಾಕ್ಷಿ ಧನ್ಯವಾದ ಸಮರ್ಪಿಸಿದರು.





Please follow and like us:

Leave a Reply

Your email address will not be published. Required fields are marked *