ಧನ್ವಂತರಿ ಜಯಂತಿ : 01/11/2013
> ಆಯುರ್ವೇದದ ದೃಷ್ಟಿಯಿಂದ ಈ ದಿನವು ಧನ್ವಂತರಿ ಜಯಂತಿಯ ದಿನವಾಗಿದೆ. ವೈದ್ಯರು ಈ ದಿನ ಧನ್ವಂತರಿಯ (ದೇವರ ವೈದ್ಯ) ಪೂಜೆಯನ್ನು ಮಾಡುತ್ತಾರೆ. ಬೇವಿನ ಎಲೆಯ ಸಣ್ಣ-ಸಣ್ಣ ತುಂಡು ಮತ್ತು ಸಕ್ಕರೆಯನ್ನು ‘ಪ್ರಸಾದ’ವೆಂದು ಎಲ್ಲರಿಗೂ ಕೊಡುತ್ತಾರೆ. ಇದರಲ್ಲಿ ಬಹುದೊಡ್ಡ ಅರ್ಥವಿದೆ. ಬೇವು ಅಮೃತದಿಂದ ಉತ್ಪನ್ನವಾಗಿದೆ. ಧನ್ವಂತರಿಯು ಅಮೃತತತ್ವವನ್ನು ಕೊಡುವವನಾಗಿದ್ದಾನೆ ಎಂಬುದು ಇದರಿಂದ ಸ್ಪಷ್ಟ ವಾಗುತ್ತದೆ. ಪ್ರತಿದಿನ ಬೇವಿನ ಐದಾರು ಎಲೆಗಳನ್ನು ತಿಂದರೆ ರೋಗಗಳು ಬರುವ ಸಂಭವವೇ ಕಡಿಮೆಯಾಗುತ್ತದೆ. ಬೇವಿಗೆ ಇಷ್ಟೊಂದು ಮಹತ್ವವಿರುವುದರಿಂದಲೇ ಈ ದಿನ ಅದನ್ನು ಧನ್ವಂತರಿಯ ಪ್ರಸಾದವೆಂದು ಕೊಡುತ್ತಾರೆ. ಬೇವಿನ ಆಧ್ಯಾತ್ಮಿಕ ಮಹತ್ವವನ್ನು ಸನಾತನದ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು' ಇದರಲ್ಲಿ ಕೊಡಲಾಗಿದೆ.
.
Forwarded by Dr.Virupaksh
Please follow and like us: