National Drs day celebration @ Udupi

ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ. ಉಡುಪಿ ಘಟಕದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನ ವನ್ನು (ಅದೇ ದಿನ 1-7-2021 ರಂದು) ವಿಶೇಷ ವಾಗಿ ಆಚರಿಸಲಾಯಿತು.

ಡಾ. ಪ್ರಕಾಶ್ ನಾಯಕ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ವೈದ್ಯರೆಲ್ಲರಿಗೂ ಶುಭಕೋರಿದರು.

ಡಾ. ನಿರಂಜನ್ ರಾವ್ Md. Phd. ಡೀನ್ ಸ್ನಾತಕೋತ್ತರ ವಿಭಾಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುಷ್ ಕಾಲೇಜು (SDM ಆಯುರ್ವೇದ ಕಾಲೇಜು) ಉಡುಪಿ ಇವರನ್ನು ಸನ್ಮಾನಿಸಲಾಯಿತು. ನಂತರ ಡಾ. ನಿರಂಜನ್ ರಾವ್ ರವರು “ಅನ್ನವಹ ಸ್ರೋತೋ ವಿಕಾರಗಳು & ಚಿಕಿತ್ಸೆ” ಬಗ್ಗೆ ಉಪನ್ಯಾಸ ನೀಡಿದರು.

ಕರ್ನಾಟಕ ಸರಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ವೀಣಾ ಕಾರಂತ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ. ಸಂಧ್ಯಾ ಸ್ವಾಗತಿಸಿದರು, ಡಾ. ಪ್ರದೀಪ್ ವಂದಿಸಿದರು, ಡಾ. ಪೂರ್ಣಿಮಾ ಖಜಾಂಜಿ ಉಡುಪಿ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *